Monday, June 27, 2016

Health talk & camp @ thirthahalli by our MO.

Health talk by Dr.Ravishankar udupa ( MO, GAD, Hodala, Thirthahalli Tq, Shimoga Diatrict ) about 'AYURVEDA DINACHARYA' and Health checkup camp at Govt.Girls high school on 24th JUN 2016 . Program was organised by LIC OF INDIA Thirthalli branch.

Sunday, June 19, 2016

IDY Preparation @ Shimoga

Pre event on yoga @ Blore

Take advantage of UPA Yoga, even before the World Yoga Day: Dr. Shalini Rajaneesh

ವಿಶ್ವ ಯೋಗ ದಿನಾಚರಣೆಯ ಮುನ್ನವೇ, ಉಪ ಯೋಗದ ಉಪಯೋಗ ಪಡೆಯಿರಿ : ಡಾ ಶಾಲಿನಿ ರಜನೀಶ್

ಬೆಂಗಳೂರು, ಜೂನ್ 17 (ಕರ್ನಾಟಕ ವಾರ್ತೆ) : ವಿಶ್ವ ಯೋಗ ದಿನಾಚರಣೆಯ ಮುನ್ನವೇ, ಉಪ ಯೋಗದ ಉಪಯೋಗವನ್ನು ಪಡೆಯಿರಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರು ಉದ್ಯಾನ ನಗರಿಯ ನಾಗರೀಕರಲ್ಲಿ ಮನವಿ ಮಾಡಿದ್ದಾರೆ.

ಜೂನ್ 21 ರಂದು ನಡೆಯಲಿರುವ ಎರಡನೇ ವಿಶ್ವ ಯೋಗ ದಿನಾಚರಣೆಗೆ ನಗರದ ನಾಗರೀಕರನ್ನು ಸಜ್ಜುಗೊಳಿಸಲು ಪ್ರಯತ್ನಿಸಿರುವ ಆಯುಷ್ ಇಲಾಖೆಯು ಪೂರ್ವಭಾವಿಯಾಗಿ ಜೂನ್ 19 ರ ಭಾನುವಾರದಂದೇ ಬೆಳಿಗ್ಗೆ 7-30 ಗಂಟೆಯಿಂದ ಕಬ್ಬನ್ ಉದ್ಯಾನದ ಸರ್ ಕೆ ಶೇಷಾದ್ರಿ ಸ್ಮಾರಕ ಗ್ರಂಥಾಲಯದ ಮುಂಭಾಗದಿಂದ ಹಡ್ಸನ್ ವೃತ್ತದವರೆಗೆ ಉಪ ಯೋಗ ಕಾರ್ಯಕ್ರಮವನ್ನು ಆಯೋಜಿಸಿದೆ. ಇಶಾ ಪ್ರತಿಷ್ಠಾನದ ಸಹಯೋಗದೊಂದಿಗೆ ಆಯೋಜಿಸಿರುವ ಈ ವಿಶೇಷ ಕಾರ್ಯಕ್ರಮವು ಕೇವಲ 90-ನಿಮಿಷಗಳ ಅವಧಿಯದ್ದಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ಯೋಗಾಭ್ಯಾಸದ ಮೂಲ ಆಸನಗಳನ್ನು ಕಲಿಸಿಕೊಡಲಾಗುತ್ತದೆ.

ಮುಂದಿನ ದಿನಗಳಲ್ಲೂ ಯೋಗವನ್ನು ಮುಂದುವರೆಸ ಬಯಸುವವರಿಗೆ ಕಾರ್ಯಕ್ರಮದ ಆವರಣದಲ್ಲಿ ಯೋಗ ಕುರಿತ ಪುಸ್ತಕಗಳು ಹಾಗೂ ದೃಶ್ಯ ಚಿತ್ರಿಕೆಗಳು ( ಡಿ ವಿ ಡಿ – ಡಿಜಿಟಲ್ ವೀಡಿಯೋ ಡಿಸ್ಕ್ ) ಸುಲಭ ದರದಲ್ಲಿ ಲಭಿಸಲಿವೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು ಟಿ ಖಾದರ್ ಅವರು ಉಪ ಯೋಗದ ಈ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಡಾ ಶಾಲಿನಿ ರಜನೀಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

goo.gl/cBzevw

Yoga Essay competition @ mandya

IDY Pre-Activities @ koppala